Categories
ಕನ್ನಡ Breaking

ಗೃಹಣಿ ಕೊಲೆಗೈದ ದುಷ್ಕರ್ಮಿಗಳು

ಬೆಂಗಳೂರು, ಸೆ.೧೧: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಕೊಲೆಗೈದಿರುವ ಘಟನೆ ಇಲ್ಲಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹೊರವಲಯದ ಆನೇಕಲ್‌ನ ಸಿಂಗೇನ ಅಗ್ರಹಾರದಲ್ಲಿ ಶ್ವೇತಾ ಎಂಬಾಕೆ ಕೊಲೆಯಾದವರು ಎಂದು ತಿಳಿದುಬಂದಿದೆ.

ಗುರುವಾರ ರಾತ್ರಿ ೯ ಗಂಟೆಗೆ  ಮನೆಯಲ್ಲಿ ಶ್ವೇತಾ ಒಬ್ಬರೆ ಇದ್ದಿದ್ದನ್ನು ಗಮನಿಸಿ ಮನೆಗೆ ದುಷ್ಕರ್ಮಿಗಳು ನುಗ್ಗಿ ಮಾರಕಾಸ್ತçಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಬAಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Categories
ಕನ್ನಡ Breaking

ಅಫೀಮು ಮಾರಾಟಗಾರರ ಬಂಧನ

ಬೆಂಗಳೂರು, ಸೆ.೧೧: ಮಾದಕ  ವಸ್ತು ಅಫೀಮು ಮಾರಾಟ  ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಉಪ್ಪಾರಪೇಟೆ ಪೊಲೀಸರು ೨.೫೦ ಲಕ್ಷ ರೂ. ಮೌಲ್ಯದ ಅಫೀಮನ್ನು ವಶಪಡಿಸಿಕೊಂಡಿದ್ದಾರೆ.

ವಾಲ್ಮೀಕಿನಗರ ಮತ್ತು ಕೆ.ಪಿ.ಅಗ್ರಹಾರ ನಿವಾಸಿಗಳಾದ ಅಹ್ಮದ್ (೨೪), ಗೋಪಿ (೨೪) ಬಂಧಿತ ಆರೋಪಿಗಳಾಗಿದ್ದಾರೆ.

ಸೆ.೧೦ರಂದು ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿ ಪಾರ್ಕ್ನ ಮೆಟ್ರೋ ರೈಲ್ವೆ ನಿಲ್ದಾಣದ ರಸ್ತೆಯ ಬಳಿ ಇಬ್ಬರು ಆರೋಪಿಗಳು ಮಾದಕವಸ್ತು ಅಫೀಮು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ್ಪಾರಪೇಟೆ ಪೊಲೀಸ್ ಠಾಣೆ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.  ಆರೋಪಿಗಳಿಂದ ೨.೫೦ ಲಕ್ಷ ರೂ. ಮೌಲ್ಯದ ೬೦೦ ಗ್ರಾಂ ತೂಕದ ಮಾದಕವಸ್ತು ಅಫೀಮು ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು  ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Categories
ಕನ್ನಡ Breaking

ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ: ಬಂಧನ

ಬೆಂಗಳೂರು, ಸೆ.೧೧: ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬAಧ ಮತ್ತೋರ್ವನನ್ನು ಇಲ್ಲಿನ ಪೂರ್ವ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮುಝಾಹಿದ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡುತ್ತಿದ್ದ ಮೊಜಾಹಿದ್, ಗಲಭೆ ದಿನ ನೂರಕ್ಕೂ ಹೆಚ್ಚು ಮಂದಿಯನ್ನು ಡಿಜೆ ಹಳ್ಳಿ ಠಾಣೆ ಬಳಿಯಿಂದ ಕರೆದೊಯ್ದು ಶಾಸಕ ಅಖಂಡ ಅವರ ಮನೆ ತೋರಿಸಿದ್ದ ಎನ್ನಲಾಗಿದೆ.
ಗಲಭೆ ನಂತರ ತಲೆಮರೆಸಿಕೊಂಡಿದ್ದ.ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Categories
ಕನ್ನಡ Breaking

ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಧಾನ ಪರಿಷತ್ತಿ ಸ್ಥಾನ ನೀಡಿ

ಬೆಂಗಳೂರು, ಜೂ.29: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನೇಮಿಸಲು ಬಿಜೆಪಿ ಮುಂದಾಗಬೇಕೆಂದು ಕ್ರೈಸ್ತ ಸಮುದಾಯದ ನಿಯೋಗ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿಯೋಗದ ಪ್ರಮುಖರಾದ ಫಾದರ್ ಇಮ್ಯಾನುಯೆಲ್ ಮಾತನಾಡಿ, ಪ್ರಸ್ತುತ ಕರ್ನಾಟಕದ ವಿಧಾನ ಪರಿಷತ್ತಿ ಸದಸ್ಯ ಸ್ಥಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಗುರುತಿಸಿ ನಾಮ ನಿರ್ದೇಶನ ಮಾಡುತ್ತಿರುವ ಹಿನ್ನೆಲೆ ರಾಜ್ಯ ರಾಜಕೀಯ ಹಾಗೂ ಧರ್ಮಾತೀತವಾಗಿ ಸೇವೆ ಸಲ್ಲಿಸಿರುವ ಅನ್ವರ್ ಮಾಣಿಪ್ಪಾಡಿ ಅವರನ್ನು ಪರಿಷತ್ತಿನ ಸ್ಥಾನಕ್ಕೆ ಆಯ್ಕೆ ಮಾಡಲು ಬಿಜೆಪಿ ಮುಂದಾಗಬೇಕು ಎಂದರು.

ಬಿಜೆಪಿ ಪಕ್ಷದಲ್ಲಿ ಹಾಗೂ ವಿವಿಧ ನಿಗಮಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿರುವ ಅನ್ವರ್ ಮಾಣಿಪ್ಪಾಡಿ ಅವರು ಕ್ರೈಸ್ತ ಸಮುದಾಯದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ವಿವಿಧ ಯೋಜನೆಗಳು ಕೆಳವರ್ಗಗಳಿಗೆ ದೊರೆಯುವಂತೆ ಶ್ರಮವಹಿಸಿದ್ದಾರೆ.ಹೀಗಾಗಿ, ಅವರಿಗೆ ಪರಿಷತ್ತಿನಲ್ಲಿ ಸ್ಥಾನ ನೀಡಿ, ಈ ಸಮುದಾಯದ ಧ್ವನಿಯನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ನುಡಿದರು.

ಭೇಟಿ: ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಧಾನ ಪರಿಷತ್ತಿನ ಸ್ಥಾನ ಕಲ್ಪಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೂ ಕ್ರೈಸ್ತ ಸಮುದಾಯದ ಮುಖಂಡರು ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದು ಫಾದರ್ ಇಮ್ಯಾನುಯೆಲ್ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೆಂಕಟೇಶ್ ನಾಯಕ್, ರಾಷ್ಟ್ರೀಯ ಇಸಾಯಿ ಮಹಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಜೋಸೆಫ್ ರವಿ, ಕರ್ನಾಟಕ ಕ್ರಿಶ್ಚಿಯನ್ ಫೋಂ ರಾಜ್ಯ ಉಪಾಧ್ಯಕ್ಷ ಶಾಂತಕುಮಾರ್ ಕೆನಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Categories
ಕನ್ನಡ Breaking

ಪ್ರಧಾನಿ ಮೋದಿಗೆ ಮನುಷ್ಯತ್ವವೇ ಇಲ್ಲ:ಸಿದ್ದರಾಮಯ್ಯ

ಬೆಂಗಳೂರು, ಜೂ.29: ಪೆಟ್ರೋಲ್, ಡೀಸೆಲ್ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ಮೋದಿಯವರಿಗೆ ಮನುಷ್ಯತ್ವವೇ ಇಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಯವರನ್ನು ರಾಕ್ಷಸೀ ಪ್ರವೃತ್ತಿ. ಅವರಿಗೆ ಮಾನವೀಯತೆ ಎಂಬುದೇ ಇಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಸೈಕಲ್ ಚಳವಳಿ ಮತ್ತು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.

ಡಾ. ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತೈಲ ದರವನ್ನು ಕೊಂಚ ಏರಿಸಿದ್ದರೂ ಬಿಜೆಪಿಯವರು ತಲೆಯ ಮೇಲೆ ಗ್ಯಾಸ್ ಸಿಲಿಂಡರ್‍ಗಳನ್ನು ಹೊತ್ತು ಬೀದಿಗೆ ಇಳಿಯುತ್ತಿದ್ದರು. ಇದೀಗ ಪೆಟ್ರೋಲ್, ಡೀಸೆಲ್ ದರ ಗಗನ ಮುಟ್ಟಿದೆ ಆದರೂ ಬಿಜೆಪಿಯವರೇಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ್ ದರವನ್ನು ಏರಿಸಿ ಜನ ಸಾಮಾನ್ಯರಿಗೆ ತೊಂದರೆ ಕೊಡಬಾರದು ಎಂದು ಮನಮೋಹನಸಿಂಗ್ ಅವರು ಸಬ್ಸಿಡಿ ನೀಡುತ್ತಿದ್ದರು. ಆದರೆ, ನರೇಂದ್ರ ಮೋದಿಯವರಿಗೆ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಜನರನ್ನು ಸುಲಿಗೆ ಮಾಡುವ ಜನ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದರು.

ಕಳೆದ 22 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಕೊರೊನಾ ಪರಿಣಾಮ ಉದ್ಯೋಗ ಇಲ್ಲದೆ ಪರದಾಡುತ್ತಿರುವ ಮಧ್ಯಮ ವರ್ಗದ ಜನತೆ ಹಾಗೂ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರು ಇದರಿಂದ ಭಾರಿ ಹೊಡೆತ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಬ್ಯಾರಲ್‍ಗೆ 130 ಡಾಲರ್‍ನಂತೆ ಮಾರಾಟವಾಗುತ್ತಿದ್ದಾಗಲೇ ಅಂದಿನ ಯುಪಿಎ ಸರ್ಕಾರ ದರ ಏರಿಕೆಯನ್ನು ಈ ಪ್ರಮಾಣದಲ್ಲಿ ಮಾಡಿರಲಿಲ್ಲ. ಹೀಗಾಗಿ ಮೋದಿಯವರು ತಮ್ಮ ಬೆನ್ನು ತಾವೇ ನೋಡಿಕೊಳ್ಳಬೇಕು.

ಕಚ್ಛಾ ತೈಲ ದರ ಇದೀಗ ಬ್ಯಾರಲ್‍ಗೆ 20-30 ಡಾಲರ್ ನಂತೆ ಮಾರಾಟವಾಗುತ್ತಿದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಲೀಟರ್‍ಗೆ 25-30 ರೂ. ಪ್ರಕಾರ ಮಾರಾಟವಾಗಬೇಕಿತ್ತು. ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಯದ್ವಾತದ್ವ ಏರಿಕೆ ಮಾಡುವ ಮೂಲಕ 18 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹ ಮಾಡಿದೆ ಎಂದು ಹೇಳಿದರು.

ಜನತೆಯ ರಕ್ತ ಹೀರುವ ಸರ್ಕಾರ ಕೇಂದ್ರದಲ್ಲಿದೆ. ಅಲ್ಲಿ ಆಡಳಿತ ನಡೆಸುತ್ತಿರುವವವರು ಮಾನವೀಯತೆಯನ್ನೇ ಮರೆತು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕಿಡಿ ಕಾರಿದರು.
ಸೈಕಲ್ ಚಳವಳಿಯ ಅಂಗವಾಗಿ ಸಿದ್ದರಾಮಯ್ಯ ಅವರು ಬೆಳಗ್ಗೆ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿ ವರೆಗೆ ಸೈಕಲ್ ನಲ್ಲಿ ತೆರಳಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Categories
ಕನ್ನಡ Breaking

ಆಯುಕ್ತರ ಕಚೇರಿ ಆಯಿತು, ಈಗ ಸಂಚಾರ ಪೊಲೀಸ್ ಕೇಂದ್ರ ಕಚೇರಿಯೂ ಸೀಲ್‌ಡೌನ್

ಬೆಂಗಳೂರು, ಜೂ. 27 : ನಗರ ಪೊಲೀಸ್ ಆಯುಕ್ತರ ಬಳಿಕ ಇದೀಗ ಸಂಚಾರ ಪೊಲೀಸ್ ವಿಭಾಗದ ಸಿಬ್ಬಂದಿಯೊರ್ವರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆ ಜೂ.30ರವರೆಗೂ ಸಂಚಾರ ಪೂರ್ವ ವಿಭಾಗದ ಕೇಂದ್ರ ಕಚೇರಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ಸಂಚಾರ ನಿರ್ವಹಣ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.ಈ ಕಾರಣಕ್ಕಾಗಿ ಆರೋಗ್ಯಾಧಿಕಾರಿಗಳ ಸೂಚನೆಯಂತೆ ಜೂ.30ರವರೆಗೂ ಸೀಲ್‌ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಕೆಲಸವನ್ನು ನಿರ್ವಹಿಸುವುದಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

Categories
ಕನ್ನಡ Breaking

ಲಾಕ್‌ಡೌನ್‌ನಲ್ಲಿ ಕಳ್ಳನ ಕೈಚಳಕ, ಇಷ್ಟೊಂದು ಚಿನ್ನ ಕದ್ದಿದ್ದ ಅಸಾಮಿ…!

ಬೆಂಗಳೂರು, ಜೂ. 27 : ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಕೆಲ ಮಂದಿ ಸ್ವಗ್ರಾಮಗಳಿಗೆ ತಲುಪಿದ್ದರು.ಈ ಸಂದರ್ಭದಲ್ಲಿ ಮನೆಗಳಿಗೆ ಬೀಗಿ ಹಾಕಿರುವುದನ್ನೇ ನೋಡಿದ ಅಸಾಮಿಯೊರ್ವ ಕಳ್ಳತನಕ್ಕೆ ಮುಂದಾಗಿ, ಸದ್ಯ ಮಾಗಡಿ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಉದಯ್‌ಕುಮಾರ್ ಬಂಧಿತ ಆರೋಪಿ ಆಗಿದ್ದು, ಈತ ಕಳವು ಮಾಡಿದ್ದ ಬರೋಬ್ಬರಿ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳುವಲ್ಲಿ   ಮಾಗಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರ್ಚ್ ತಿಂಗಳಲ್ಲಿ  ಮಾಗಡಿಯ ಹರ್ತಿ ಗ್ರಾಮದ ರೇಣುಕಮ್ಮ ಎಂಬುವರ ಮನೆಯಬೀಗ ಒಡೆದು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣಗಳನ್ನ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬAದ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು  ಆರೋಪಿಯನ್ನು  ಬಂಧಿಸಿ ವಿಚಾರಣೆ ನಡೆಸಿದಾಗ ಬಂಧಿತ ಆರೋಪಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 18 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಹೊರ ಬಂದಿವೆ.
ಬಂಧಿತನಿAದ 560 ಗ್ರಾಂ ಚಿನ್ನಾಭರಣಗಳು,3 ಕೆ.ಜಿ ಬೆಳ್ಳಿ ಸಾಮಾಗ್ರಿಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Categories
ಕನ್ನಡ Breaking

ಮಾಸ್ಕ್ ಹಾಕಿಲ್ಲ ಎಂದರೆ ಕ್ರಮ:ಭಾಸ್ಕರ್ ರಾವ್

ಬೆಂಗಳೂರು, ಜೂ. 27 : ಕೋವಿಡ್-೧೯ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಮುಂಜಾಗೃತೆ ವಹಿಸದೆ, ನಿರ್ಲಕ್ಷö್ಯ ತೋರುವ ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳದ ಹಾಗೂ ಮಾಸ್ಕ್ ಧರಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ನಗರದ ಶಾಪಿಂಗ್ ಮಾಲ್, ಹೋಟೆಲ್, ಬ್ಯಾಂಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Categories
ಕನ್ನಡ Breaking

ಬಿಎಂಟಿಸಿ ನೌಕರರು ಕೊರೋನ ವಾರಿಯರ್ಸ್ ಎಂದು ಘೋಷಿಸಿ: ಎನ್.ಎ.ಹ್ಯಾರೀಸ್

ಬೆಂಗಳೂರು, ಜೂ.27: ಕೊರೋನ ವೇಳೆ ಎಲ್ಲರಂತೆ ಸೇವೆ ಸಲ್ಲಿ ಸುತ್ತಿರುವ ಬಿಎಂಟಿಸಿ ನೌಕರರನ್ನು ಕೊರೋನ ಸೈನಿಕರೆಂದು ಪರಿಗಣಿಸಿ, ವಿಶೇಷ ಪರಿಹಾರ ಧನ ಘೋಷಿಸಬೇಕೆಂದು ಬಿಎಂಟಿಸಿ ಮಾಜಿ ಅಧ್ಯಕ್ಷ, ಶಾಸಕ ಎನ್.ಎ.ಹಾರೀಸ್ ಒತ್ತಾಯಿಸಿದ್ದಾರೆ.

ಶನಿವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನನಿತ್ಯ ಬೆಂಗಳೂರಿನಲ್ಲಿ ಕೊರೋನ ಸೋಂಕಿತರು ಹೆಚ್ಚಾಗುತ್ತಿದ್ದು, ಪೊಲೀಸರು, ಆರೋಗ್ಯ ಹಾಗೂ ಪಾಲಿಕೆ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ, ಬೆಂಗಳೂರು ಸಾರಿಗೆಯ ಜೀವನಾಡಿ ಆಗಿರುವ ಬಿಎಂಟಿಸಿ ನೌಕರರು, ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆಗೆ ಮುಂದಾಗಿದ್ದಾರೆ.ಇAತಹ ಸಂದರ್ಭದಲ್ಲಿ ಸರಕಾರ ಅವರನ್ನು ಶ್ಲಾಘಿಸಿ, ಕೋವಿಡ್-೧೯ನಿಂದ ಮೃತರಾದರೆ ವಿಶೇಷ ಪರಿಹಾರ ನೀಡುವುದಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು.
ಬಿಎಂಟಿಸಿಯಲ್ಲಿ ಈಗಾಗಲೇ ೨೨ ಕೋವಿಡ್-೧೯ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪೈಕಿ ೧೭ ಪ್ರಕರಣ ಸಕ್ರಿಯವಾಗಿದ್ದರೆ, ೫ ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎನ್ನುವ ಮಾಹಿತಿ ಇದೆ ಎಂದ ಅವರು, ಈ ಸಂಸ್ಥೆಯ ನೌಕರರಿಗೆ ಸೂಕ್ತ ಸೌಲಭ್ಯ ಒದಗಿಸುವ ಜೊತೆಗೆ ಆತ್ಮಸ್ಥೆöÊರ್ಯ ತುಂಬಲು ರಾಜ್ಯ ಸರಕಾರ ಮುಂದಾಗಲಿ ಎಂದರು.