ಲಾಕ್‌ಡೌನ್‌ನಲ್ಲಿ ಕಳ್ಳನ ಕೈಚಳಕ, ಇಷ್ಟೊಂದು ಚಿನ್ನ ಕದ್ದಿದ್ದ ಅಸಾಮಿ…!

ಬೆಂಗಳೂರು, ಜೂ. 27 : ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಕೆಲ ಮಂದಿ ಸ್ವಗ್ರಾಮಗಳಿಗೆ ತಲುಪಿದ್ದರು.ಈ ಸಂದರ್ಭದಲ್ಲಿ ಮನೆಗಳಿಗೆ ಬೀಗಿ ಹಾಕಿರುವುದನ್ನೇ ನೋಡಿದ ಅಸಾಮಿಯೊರ್ವ ಕಳ್ಳತನಕ್ಕೆ ಮುಂದಾಗಿ, ಸದ್ಯ ಮಾಗಡಿ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಉದಯ್‌ಕುಮಾರ್ ಬಂಧಿತ ಆರೋಪಿ ಆಗಿದ್ದು, ಈತ ಕಳವು ಮಾಡಿದ್ದ ಬರೋಬ್ಬರಿ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳುವಲ್ಲಿ   ಮಾಗಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರ್ಚ್ ತಿಂಗಳಲ್ಲಿ  ಮಾಗಡಿಯ ಹರ್ತಿ ಗ್ರಾಮದ ರೇಣುಕಮ್ಮ ಎಂಬುವರ ಮನೆಯಬೀಗ ಒಡೆದು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣಗಳನ್ನ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬAದ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು  ಆರೋಪಿಯನ್ನು  ಬಂಧಿಸಿ ವಿಚಾರಣೆ ನಡೆಸಿದಾಗ ಬಂಧಿತ ಆರೋಪಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 18 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಹೊರ ಬಂದಿವೆ.
ಬಂಧಿತನಿAದ 560 ಗ್ರಾಂ ಚಿನ್ನಾಭರಣಗಳು,3 ಕೆ.ಜಿ ಬೆಳ್ಳಿ ಸಾಮಾಗ್ರಿಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.